ಬೆಳಗಾವಿ ಅಥವಾ ಬೆಳಗಾಂ ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಬೆಳಗಾವಿ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. ಈ ಜಿಲ್ಲೆಯಲ್ಲಿರುವ ಸುವರ್ಣ ವಿಧಾನಸೌಧವು ಕರ್ನಾಟಕದ ಎರಡನೇ ಶಾಸಕಾಂಗ ಸಭೆಯ ಮುಖ್ಯ ಕಚೇರಿಯಾಗಿದೆ. ಟೆಂಪ್ಲೇಟು: ಜಿಲ್ಲೆ == ಭೂಗೋಳ == ಜಿಲ್ಲೆಯು 13,415 km2 (5,180 ) ವಿಸ್ತೀರ್ಣವನ್ನು ಹೊಂದಿದೆ ಮತ್ತು ಇದು ಕರ್ನಾಟಕದ ಅತಿದೊಡ್ಡ ಜಿಲ್ಲೆಯಾಗಿದೆ. == ಕೃಷಿ == ಬೆಳಗಾವಿ ಜಿಲ್ಲೆಯ 1.5 ಲಕ್ಷ ಹೆಕ್ಟೇರ್‌ಗಳಷ್ಟು ಭೂಮಿಯನ್ನು ಕಬ್ಬು ಬೆಳೆಯಲು ಬಳಸಲಾಗುತ್ತಿದೆ, ಇದು ಕಳೆದ ದಶಕದಲ್ಲಿ ಕಬ್ಬು ಉತ್ಪಾದನೆಯಲ್ಲಿ ಮಂಡ್ಯ ಜಿಲ್ಲೆಯನ್ನು ಮಿರಿಸಿದೆ, ಈ ಜಿಲ್ಲೆಯನ್ನು ಕರ್ನಾಟಕದ ಸಕ್ಕರೆ ಬಟ್ಟಲು ಎಂದು ಕರೆಯಲ್ಪಡುತ್ತದೆ == ಆಡಳಿತ ವಿಭಾಗಗಳು == ಬೆಳಗಾವಿ ಜಿಲ್ಲೆಯ ಆಡಳಿತವನ್ನು 10 ತಾಲೂಕುಗಳಾಗಿ ವಿಂಗಡಿಸಲಾಗಿದೆ. == ಜನಸಂಖ್ಯಾ == 2011 ರ ಭಾರತದ ಜನಗಣತಿಯ ಪ್ರಕಾರ, ಜಿಲ್ಲೆಯು 47,79,661 ಜನಸಂಖ್ಯೆಯನ್ನು ಹೊಂದಿದೆ, ಇದು ಬೆಂಗಳೂರಿನ ನಂತರ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಕರ್ನಾಟಕದ ಜಿಲ್ಲೆಯಾಗಿದೆ. ಇದು ಸಿಂಗಾಪುರ ದೇಶದ ಸಮನಾದ ಮತ್ತು ಅಮೆರಿಕಾ ದೇಶದ ಅಲ್ಬಾಮ ರಾಜ್ಯಕ್ಕೆ ಸಮನಾದ ಜನಸಂಖೆಯಾಗಿದೆ. ಪ್ರಸ್ತುತ ಜಿಲ್ಲೆಯು ಭಾರತದ 640 ಜಿಲ್ಲೆಗಳಲ್ಲಿ ಜನಸಂಖ್ಯೆಯಲ್ಲಿ 25ನೆ ಸ್ಥಾನದಲ್ಲಿ ಇದೆ. 2001-2011 ರ ದಶಕದಲ್ಲಿ ಜಿಲ್ಲೆಯ ಜನಸಂಖ್ಯೆಯ ಬೆಳವಣಿಗೆಯು ಶೇಕಡಾ 13.38% ಆಗಿದೆ. ಜಿಲ್ಲೆಯ ಸಾಕ್ಷರತೆಯು ಶೇಕಡಾ 73.94% ಜಿಲ್ಲೆಯಲ್ಲಿ ಶೇಕಡಾ 84.49 ರಷ್ಟು ಹಿಂದೂಗಳು. ಶೇಕಡಾ 11.06ರಷ್ಟು ಮುಸಲ್ಮಾನರು, ಶೇಕಡಾ 3.73 ರಷ್ಟು ಜೈನರು , ಮತ್ತು ಶೇಕಡಾ 0.72 ರಷ್ಟು ಇತರೆ ಧರ್ಮದವರು ನೆಲೆಸಿದ್ದಾರೆ. ಜಿಲ್ಲೆಯಲ್ಲಿ ಶೇಕಡಾ 68.40 ರಷ್ಟು ಕನ್ನಡಿಗರು, ಶೇಕಡಾ 18.70 ರಷ್ಟು ಮರಾಠಿಗರು, ಶೇಕಡಾ 9.79 ರಷ್ಟು ಉರ್ದು ಭಾಷಿಕರು ಮತ್ತು ಶೇಕಡಾ 3.10 ರಷ್ಟು ಇತರೆ ಭಾಷೆ ಮಾತಾನಾಡುವವರು ಇದ್ದಾರೆ.. == ನದಿಗಳು == ಬೆಳಗಾವಿ ಜಿಲ್ಲೆಯಲ್ಲಿ ಹರಿಯವ ನದಿಗಳು : ಕೃಷ್ಣ ಮಲಪ್ರಭಾ ಘಟಪ್ರಭಾ ವೇದಗಂಗಾ ದೂಧಗಂಗಾ ಮಹದಾಯಿ ಪಂಡರಿ ಹಿರಣ್ಯಕೇಶಿ == ಶಿಕ್ಷಣ == ಬೆಳಗಾವಿ ಜಿಲ್ಲೆಯಲ್ಲಿ ಪ್ರಸ್ತುತ ಮೂರು ವಿಶ್ವವಿದ್ಯಾಲಯಗಳು ಇದಾವೆ ಅವುಗಳೆಂದರೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ , ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ, ಕರ್ನಾಟಕ ಲಿಂಗಾಯತ ಶಿಕ್ಷಣ (ಕೆಎಲ್‌ಇ) ಸೊಸೈಟಿ ಮತ್ತು ಜಿಲ್ಲೆಯಲ್ಲಿ ಒಂಬತ್ತು ಇಂಜಿನಿಯರಿಂಗ್ ಕಾಲೇಜು, ಎರಡು ವೈದ್ಯಕಿಯ ಕಾಲೇಜು, ಹದಿನೈದು ಪಾಲಿಟೆಕ್ನಿಕ್ ಕಾಲೇಜು,ನೂರ ಎಂಬತ್ತು ಪದವಿ ಕಾಲೇಜುಗಳು ಕಾರ್ಯನಿರ್ವಹಿಸುತ್ತಾ ಇದಾವೆ. == ಇವನ್ನೂ ನೋಡಿ == ಉತ್ತರ ಕನ್ನಡ ಬೆಳಗಾವಿ ಕನ್ನಡ ಕರ್ನಾಟಕ == ಉಲ್ಲೇಖ ==